ಶೃತಿ ಸೇರಿದೆ
ಶೃತಿ ಸೇರಿದಾಗ ಡಾ|| ರಾಜ್ ಕುಮಾರ್, ಎಸ್. ಜಾನಕಿ
ಚಿ. ಉದಯಶಂಕರ್
ಟಿ. ನಿಜಲಿಂಗಪ್ಪ
ಶೃತಿ ಸೇರಿದೆ ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ|| ಪ ||
ಹೊಸರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ
ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ
ಹೊಸ ನೋಟವು ಕಣ್ತುಂಬಿ ಹೊಸ ರೀತಿಯ ತಂಪಾಗಿದೆ
ಬದುಕೆಲ್ಲಾ ಹಸಿರಾಗಿ ಒಲವೊಂದೇ ಉಸಿರಾಗಿ|| 1 ||
ಮಳೆಗಾಲವು ಬಂದಾಗಿದೆ ನೆಲವೆಲ್ಲ ಹಸಿರಾಗಿದೆ
ಚಳಿಗಾಲವು ಕಂಡಾಗಿದೆ ಮಂಜಿನ ತೆರೆ ಹಾಸಿದೆ
ಋತು ಚಕ್ರವು ಉರುಳಿರಲು ಬಾಳೆಂಬುವ ಬಂಡಿಯಲಿ
ಹೊಸದೊಂದು ಮೊಗ್ಗಾಗಿ ಸಂಸಾರದ ಬೆಳಕಾಗಿ|| 2 ||
ಶೃತಿ ಸೇರಿದಾಗ
ಚಿತ್ರ ನೋಡಿ